18 ವರ್ಷಗಳ ಬಳಿಕ ಮಗ ರಹೀಂನ್ನು ಭೇಟಿಯಾದ ತಾಯಿ
ರಿಯಾದ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಸೌದಿ ಜೈಲಿನಲ್ಲಿರುವ ಕೇರಳ ಕೋಝಿಕೋಡ್ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಅವರನ್ನು 18 ವರ್ಷಗಳ ಬಳಿಕ ಅವರ ತಾಯಿ ಭೇಟಿಯಾಗಿದ್ದಾರೆ. 18 ವರ್ಷಗಳಲ್ಲಿ ರಹೀಂ ತನ್ನ ಕುಟುಂಬದೊಂದಿಗೆ ಭೇಟಿಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ತಾಯಿ ಫಾತಿಮಾ, ರಹೀಮ್ ಅವರ ಸಹೋದರ ಮತ್ತು ಚಿಕ್ಕಪ್ಪ ಕೂಡ ಈ ವೀಲ್ ಭೇಟಿಯಾದರು. ಉಮ್ರಾ ಮುಗಿಸಿದ ನಂತರ ಫಾತಿಮಾ ರಿಯಾದ್ ಗೆ ಮರಳಿದರು, ಮತ್ತು ರಿಯಾದ್ ನ ಅಲ್ ಖರ್ಜ್ ರಸ್ತೆಯಲ್ಲಿರುವ ಅಲ್-ಇಸ್ಕಾನ್ ಜೈಲಿನಲ್ಲಿ ರಹೀಮ್ ಅವರನ್ನು ಭೇಟಿಯಾದರು ಎಂದು ತಿಳಿದು ಬಂದಿದೆ.
ಅವರ ತಾಯಿ ಮತ್ತು ಸಂಬಂಧಿಕರು ಕೆಲ ದಿನಗಳ ಮೊದಲು ಸೌದಿ ಅರೇಬಿಯಾ ತಲುಪಿದ್ದರೂ, ರಹೀಮ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದರು. ಜೈಲಿನಲ್ಲಿ ತನ್ನ ತಾಯಿಯನ್ನು ಭೇಟಿಯಾಗಲು ಮನಸ್ಸು ಒಪ್ಪದ ಕಾರಣ ನಾನು ಅವರನ್ನು ನೋಡಲಿಲ್ಲ ಎಂದು ರಹೀಮ್ ಹೇಳಿದ್ದರು. ರಹೀಂ ಮತ್ತು ತಾಯಿಯ ಭೇಟಿ ಭಾವನಾತ್ಮಕ ಕ್ಷಣವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ. ರಹೀಂ ಅವರ ಬಿಡುಗಡೆವಾಗಿ ಈಗಾಗಲೇ ದಾನಿಗಳ ನೆರವಿನಿಂದ ಕೋಟ್ಯಂತರ ರೂ ಸಂಗ್ರಹಿಸಲಾಗಿದ್ದು ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಅವರ ಬಿಡುಗಡೆ ವಿಳಂಬ ಆಗುತ್ತಿದೆ ಎನ್ನಲಾಗುತ್ತಿದೆ.