ಮರ್ಕಝುಲ್ ಹುದಾ ಕರ್ನಾಟಕ ಇದರ ಕೊಡಗು ಜಿಲ್ಲಾ ಎಜುಕೇಶನ್ ಡೆವಲಪ್ಮೆಂಟ್ ಸಮಿತಿ ರಚನೆ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸಿಲ್ವರಿಯಂ ಸಂಭ್ರಮದ ಅಂಗವಾಗಿ ಹಾಕಿಕೊಂಡ ಹೊಸ ಯೋಜನೆಯ ಭಾಗವಾಗಿ ನಡೆದ ರೀಚ್ ಗೋಲ್ 2k25 ಇದರ ಕೊಡಗು ಜಿಲ್ಲಾ ಸಮಾವೇಶ ಇಂದು ಕುಂಬ್ರ ಮರ್ಕಝ್ ಕ್ಯಾಂಪಸ್ ನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಫೀಕ್ ಮಾಸ್ಟರ್ ಮಂಗಳೂರು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಉತ್ತಮ ಮಾರ್ಗರೂಪಗಳನ್ನು ವಿವರಿಸಿ, ಯಶಸ್ವಿ ಪೋಷಕರಾಗಲು ಮತ್ತು ಉಜ್ವಲ ಭವಿಷ್ಯ ಗಿಟ್ಟಿಸಿಕೊಳ್ಳಲು ವಿದ್ಯಾರ್ಥಿನಿಯರು ಅನುಸರಿಸಬೇಕಾದ ವಿಚಾರಗಳನ್ನು ಮನದಟ್ಟು ಮಾಡಿದರು.
ರೀಚ್ ಗೋಲ್ 2K25 ಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷರಾದ ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಈ ಕಾರ್ಯಕ್ರಮ ನಮ್ಮಸಂಸ್ಥೆಯಲ್ಲಿ ಕಲಿತ, ಕಲಿಯುತ್ತಿರುವ ಇತರ ಜಿಲ್ಲೆಗಳ ಪೋಷಕರಿಗೂ ಮುಂದೆ ನಡೆಸುವ ಯೋಜನೆ ಹಮ್ಮಿಕೊಂಡಿದ್ದು ಇಂದು ಕೊಡಗು ಜಿಲ್ಲಾ ಪೋಷಕರಿಗೆ ನಡೆಸುವ ಮೂಲಕ ಅಧಿಕೃತ ಚಾಲನೆಯನ್ನು ನೀಡಿದ್ದೇವೆ. ಸಂಸ್ಥೆಯು ಸಿಲ್ವರಿಯಂ ಸಂಭ್ರಮದ ಭಾಗವಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಯೋಜನೆಗಳು ಪ್ರಮುಖವಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ನಮ್ಮ ವಿದ್ಯಾರ್ಥಿನಿಯರ ಪೋಷಕರು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಮಾರ್ಟ್ ಯೋಜನೆಗಳನ್ನು ನಾವು ಪರಿಚಯಿಸಲಿದ್ದು ನಿಮ್ಮ ಸಹಕಾರ ನಿರಂತರವಾಗಿರಲಿ ಎಂದರು. ಈ ವೇಳೆ ನೂತನ ಕೊಡಗು ಜಿಲ್ಲಾ ಮರ್ಕಝ್ ಎಜುಕೇಶನ್ ಡೆವಲಪ್ಮೆಂಟ್ ಕಮಿಟಿಯ ಸಾರಥಿಗಳಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು.
ಚೇರ್ಮೆನ್: ಎಂ ಎ ಯಾಮಿನ್ ಇಸ್ಮಾಯಿಲ್ ಹಾಜಿ ಮಡಿಕೇರಿ, ವೈಸ್ ಚಯರ್ಮೇನ್ ಆಗಿ ಮುಹಮ್ಮದ್ ಸಖಾಫಿ ಕೊಟ್ಟಮುಡಿ, ಜನರಲ್ ಕನ್ವೀನರ್ ಆಗಿ ಅಬ್ದುಲ್ ರಹ್ಮಾನ್ ಹೊಸಕೋಟೆ, ಕನ್ವೀನರ್ ಆಗಿ ಇಬ್ರಾಹಿಂ ಕೋಡಿಗೆ, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಪಿ.ಎಚ್ ಕುಶಾಲನಗರ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ದಲ್ಲಿ ಸಂಸ್ಥೆಯ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಅಡ್ಮಿನಿಸ್ಟ್ರೇಶನ್ ಅಸಿಸ್ಟೆಂಟ್ ಶಬ್ನ ಪುತ್ತೂರು ಉಪಸ್ಥಿತರಿದ್ದರು. ಮುಹಮ್ಮದ್ ಸಖಾಫಿ ಕೊಟ್ಟಮುಡಿ ವಂದಿಸಿದರು.