ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ನೀರಜ್ ಚೋಪ್ರಾ ಕೈ ತಪ್ಪಿದ ಅಗ್ರಸ್ಥಾನ
ಬೆಲ್ಜಿಯಂನ ಬ್ರಸೆಲ್ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಫೈನಲ್ನಲ್ಲಿ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಅ್ಯಂಡರ್ಸನ್ ಪೀಟರ್ಸ್ 87.87 ಮೀಟರ್ ದೂರಕ್ಕೆ ಭರ್ಜಿ ಎಸೆದು ಮೊದಲ ಸ್ಥಾನ ಪಡೆದರೆ, ನೀರಜ್ ಚೋಪ್ರಾ 87.86 ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು.
ಅಂದರೆ ಇಲ್ಲಿ ಮೊದಲ ಸ್ಥಾನ ಹಾಗೂ ದ್ವಿತೀಯ ಸ್ಥಾನಗಳ ನಡುವಣ ವ್ಯತ್ಯಾಸ ಕೇವಲ 0.01 ಸೆಂಟಿ ಮೀಟರ್ ಮಾತ್ರ. ಈ ಕೂದಲೆಳೆಯ ಅಂತರದಿಂದ ನೀರಜ್ ಚೋಪ್ರಾ ಅಗ್ರಸ್ಥಾನವನ್ನು ಕಳೆದುಕೊಂಡರು.