ಅಂತಾರಾಷ್ಟ್ರೀಯಕ್ರೀಡೆ

ಒಂದೇ ತಂಡದಲ್ಲಿ ಇಂಡೊ-ಪಾಕ್ ಆಟಗಾರರು: ಮತ್ತೆ ಆಫ್ರೊ-ಏಷ್ಯಾ ಕಪ್ ಟೂರ್ನಿ

ಆಫ್ರೊ-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ಸಾಧ್ಯತೆಯಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ನಡುವಣ ಈ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ಕಣಕ್ಕಿಳಿಯಲಿದೆ. 2007 ರಲ್ಲಿ ಕೊನೆಯ ಬಾರಿ ಆಯೋಜನೆಗೊಂಡಿದ್ದ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲು ಐಸಿಸಿಯ ನೂತನ ಅಧ್ಯಕ್ಷರಾದ ಜಯ್ ಶಾ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.

“ನಾವು ಆಫ್ರೊ-ಏಷ್ಯಾ ಕಪ್ ಅನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ್ದೇವೆ. ಈ ಬಗ್ಗೆ ನಡೆದ ಚರ್ಚೆಗಳಲ್ಲಿ ಜಯ್ ಶಾ ಮತ್ತು ಮಹಿಂದಾ ವಲ್ಲಿಪುರಂ (ಮಲೇಷ್ಯಾ ಕ್ರಿಕೆಟ್ ಮುಖ್ಯಸ್ಥ ಮತ್ತು ಪ್ರಸ್ತುತ ಐಸಿಸಿ ನಿರ್ದೇಶಕ) ಸಕ್ರಿಯವಾಗಿ ಭಾಗವಹಿಸಿದ್ದರು” ಎಂದು ಸುಮೋದ್ ದಾಮೋದರ್ ಕ್ರಿಕ್‌ಬಝ್ಗೆ ತಿಳಿಸಿದ್ದಾರೆ.

ಸುಮಾರು 17-18 ವರ್ಷಗಳ ಹಿಂದೆ ಈ ಕಲ್ಪನೆಯನ್ನು ಮೊದಲ ಬಾರಿಗೆ ರೂಪಿಸಿದಾಗ ಮತ್ತು ಕಾರ್ಯಗತಗೊಳಿಸಿದಾಗ ಇದರಲ್ಲಿ ಭಾಗಿಯಾಗಿದ್ದವರಲ್ಲಿ ಸುಮೋದ್ ದಾಮೋದರ್ ಕೂಡ ಒಬ್ಬರು. ಇದೀಗ ಅವರೇ ಆಫ್ರೊ-ಏಷ್ಯಾ ಕಪ್ ಮತ್ತೆ ಚಾಲನೆ ನೀಡುವ ಬಗ್ಗೆ ಚರ್ಚೆಗಳನ್ನು ಶುರು ಮಾಡಿದ್ದಾರೆ. ಇತ್ತ ಜಯ್ ಶಾ ಐಸಿಸಿ ಅಧ್ಯಕ್ಷರಾಗಿದ್ದು, ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ (ಎಸಿಸಿ) ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹೀಗಾಗಿಯೇ ಈ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!