ಕರಾವಳಿ

ಬೆಳಂದೂರು: ಈಡನ್ ಗ್ಲೋಬಲ್ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

ಪುತ್ತೂರು: ಈಡನ್ ಗ್ಲೋಬಲ್ ಶಾಲೆಯಲ್ಲಿ ಹಿಂದಿ ದಿವಸ್ ಆಚರಿಸಲಾಯಿತು.ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶಾಲೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಹಿಂದಿ ದಿನದ ಸಂದೇಶವನ್ನು ನೀಡಿದರು.ನಂತರ ಶಾಲೆಯ ಹಿಂದಿ ಶಿಕ್ಷಕರಾದ ಇಮ್ತಿಯಾಝ್ ಸಿ.ಎಂ ಹಿಂದಿ ದಿವಸದ ಪ್ರಾಮುಖ್ಯತೆಯನ್ನು ತಿಳಿಸಿದರು.ವಿದ್ಯಾರ್ಥಿಗಳು ಹಾಡು,ಕಥೆ, ಭಾಷಣದ ಮೂಲಕ ಹಿಂದಿ ಭಾಷೆಯ ಮೇಲಿನ ಪ್ರೀತಿಯನ್ನು  ಹಂಚಿಕೊಂಡರು.ಹಿಂದಿ ವಿಷಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಅಕಾಡೆಮಿಕ್ ಕೋಆಡಿನೇಟರ್ ಶ್ರೀಮತಿ ಅರ್ಪಿತ,ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.ಶಾಲಾ ಹಿಂದಿ ಶಿಕ್ಷಕಿಯಾದ ಅಫ್ರೀನ  ಸ್ವಾಗತಿಸಿದರು.ಶಿಕ್ಷಕಿಯರಾದ ಫಹಿಮಾ ಬಾನು ಕಾರ್ಯಕ್ರಮ ನಿರೂಪಿಸಿದರು ಹಾಗೂ ಅಮ್ನಾಝ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!