ಅಂತಾರಾಷ್ಟ್ರೀಯ

ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಯುದ್ಧ ಕೊನೆಗೊಳಿಸಲು ಇರಾನ್ ಒಪ್ಪಿಗೆ!

ಯುದ್ಧ ಕೊನೆಗೊಳಿಸುವ ವಿಚಾರವಾಗಿ ಇರಾನ್ ಮಾತುಕತೆಗೆ ಮರಳಲು ಸಿದ್ಧವಾಗಿದೆ ಎನ್ನಲಾಗಿದ್ದು ಮಾತುಕತೆ ನಡೆಸಬೇಕಾದರೆ ಮೂರು ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ.

ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳುವಂತೆ, ಮೊದಲನೆಯದಾಗಿ ಇರಾನ್‌ನ ಸಾರ್ವಭೌಮ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಮಾನ್ಯತೆ ನೀಡಬೇಕು. ಎರಡನೆಯದಾಗಿ, ಇತ್ತೀಚಿನ ಸಂಘರ್ಷದಿಂದ ದೇಶದಲ್ಲಿ ಉಂಟಾದ ವಿನಾಶಕ್ಕೆ ಪರಿಹಾರ ಪಾವತಿಸಬೇಕು. ಮೂರನೆಯದಾಗಿ, ಭವಿಷ್ಯದಲ್ಲಿ ಇಂತಹ ಆಕ್ರಮಣಗಳು ಮರುಕಳಿಸದಂತೆ ಅಂತರರಾಷ್ಟ್ರೀಯ ಭದ್ರತಾ ಖಾತರಿ ನೀಡಬೇಕು. ಈ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಮಾತುಕತೆ ನಡೆಸಬಹುದಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!