ಐಪಿಎಲ್: ಆರ್ ಸಿ ಬಿ ತಂಡಕ್ಕೆ ಜಿಂಬಾ ಬ್ವೆ ಆಟಗಾರ ಎಂಟ್ರಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ವೇಗಿ ಲುಂಗಿ ಎನ್‌ಗಿಡಿ ತವರಿಗೆ ಮರಳಲಿದ್ದು. ಹೀಗಾಗಿ ಲುಂಗಿ ಎನ್‌ಗಿಡಿ ಬದಲಿಯಾಗಿ ಜಿಂಬಾಬ್ವೆ ತಂಡದ ಬ್ಲೆಸಿಂಗ್ ಮುಝರಬಾನಿ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ತಯಾರಿಗಾಗಿ ದಕ್ಷಿಣ ಆಫ್ರಿಕಾ ಆಟಗಾರರು ಮೇ 26 ರಂದು ತವರಿಗೆ ತೆರಳಲಿದ್ದಾರೆ. ಹೀಗಾಗಿ ಲುಂಗಿ ಎನ್‌ಗಿಡಿ ಆರ್‌ಸಿಬಿ ತಂಡವನ್ನು ತೊರೆಯಲಿದ್ದಾರೆ.
ಲುಂಗಿ ಎನ್‌ಗಿಡಿ ಹೊರಗುಳಿಯುವುದು ಖಚಿತವಾಗುತ್ತಿದ್ದಂತೆ ಆರ್‌ಸಿಬಿ ಫ್ರಾಂಚೈಸಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಆರ್‌ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಆಯ್ಕೆ ಮಾಡಲಾಗಿದೆ.
ಬ್ಲೆಸಿಂಗ್ ಮುಝರಬಾನಿ ಝಿಂಬಾಬ್ವೆ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿದ್ದು 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬ್ಲೆಸಿಂಗ್ ಮುಝರಬಾನಿ ಮೇ 27 ರಿಂದ ಆರ್‌ಸಿಬಿ ಪರ ಕಣಕ್ಕಿಳಿಯಲು ಅರ್ಹರಾಗಲಿದ್ದಾರೆ. ಅದರಂತೆ ಆರ್‌ಸಿಬಿ ತಂಡದ ಕೊನೆಯ ಲೀಗ್ ಮ್ಯಾಚ್ ಹಾಗೂ ಪ್ಲೇಆಫ್ ಪಂದ್ಯಗಳ ವೇಳೆ ಝಿಂಬಾಬ್ವೆ ವೇಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ.