ದೀಪಾವಳಿ ವೇಳೆಗೆ ರಾಜ್ಯ ಸರಕಾರ ಪತನ ಖಚಿತ: ಸಿಟಿ ರವಿ
ಹಗರಣ ಹಾಗೂ ಕಾಂಗ್ರೆಸ್ ನ ಆಂತರಿಕ ಕಚ್ಚಾಟದಿಂದಾಗಿ ದೀಪಾವಳಿ ವೇಳೆಗೆ ರಾಜ್ಯ ಸರ್ಕಾರ ಢಮಾರ್ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವುದು ಖಚಿತ ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಡಜನ್ ಆಕಾಂಕ್ಷಿಗಳು ಸಕ್ರಿಯರಾಗಿದ್ದಾರೆ. ಬಾಹ್ಯವಾಗಿ ಸಿಎಂಗೆ ಬೆಂಬಲ ಎನ್ನುತ್ತಲೇ ಆಂತರಿಕವಾಗಿ ಸಿದ್ದರಾಮಯ್ಯ ಕೆಳಗಿಳಿಯುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಸರ್ಕಾರದ ಆಯುಷ್ಯ ಸಂಕ್ರಾಂತಿವರೆಗೆ ಎಂಬುದು ದೂರವಾಯಿತು, ದೀಪಾವಳಿಗೆ ಈ ಸರ್ಕಾರ ಢಮಾರ್ ಖಚಿತ ಎಂದರು.
ಮುಂದಿನ ದಿನಗಳಲ್ಲಿ ಹೊಸ ಸಿಎಂ ಬರುತ್ತಾರೋ, ಹೊಸ ಸರ್ಕಾರ ಬರುತ್ತದೋ? ಕೆಲ ವಿಷಯಗಳನ್ನು ಕಾಲವೇ ನಿರ್ಣಯಿಸುತ್ತದೆ. ಕಾದು ನೋಡಿ ಎಂದು ಸಿ.ಟಿ ರವಿ ಹೇಳಿದ್ದಾರೆ.