ಉಪ್ಪಿನಂಗಡಿ: ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ
ಉಪ್ಪಿನಂಗಡಿ: ಇಳಂತಿಲ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿ ನಾಯಕಿ ನಿಹಮಾ ಫಾತಿಮ ಮತ್ತು ಹತ್ತನೇ ತರಗತಿ ಶಝೀನಾ ತಂಡದಿಂದ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲರಾದ ಇಬ್ರಾಹಿಮ್ ಕಲೀಲ್ ಹೇಂತಾರು ಮತ್ತು ಶಾಲಾ ಸಂಚಾಲಕರಾದ ರವೂಫ್ ಯು.ಟಿ ಮಾತನಾಡಿ ಶಿಕ್ಷಕರು ಸಮಾಜದ ನಿರ್ಮಾಣದ ಪ್ರಮುಖ ಅಂಗ ಅವರನ್ನು ಎಲ್ಲರೂ ಗೌರವಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿಯರಾದ ಅರುಣಾ , ತಾಹಿರ ಮತ್ತು ಎಲ್ಲ ಶಿಕ್ಷಕರು ಭಾಗವಹಿಸದ್ದರು.