ಆಲಂಕಾರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ-ಇಬ್ಬರಿಗೆ ಗಾಯ
ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡ ಘಟನೆ ಆಲಂಕಾರು ಸಮೀಪದ ಕಜೆ ಎಂಬಲ್ಲಿ ಸೆ.6ರಂದು ನಡೆದಿದೆ.
ಜಯಂತ ಪೂಜಾರಿ ಎಂಬವರು ಚಲಾಯಿಸುತ್ತಿದ್ದ ಆಕ್ಟಿವಾ ಹಾಗೂ ದಿನೇಶ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು ಇಬ್ಬರಿಗೂ ಗಾಯವಾಗಿದೆ. ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.
ಬೈಕ್ ಹಾಗೂ ಆಕ್ಟಿವಾಗೆ ಹಾನಿ ಸಂಭವಿಸಿದೆ.