ಸೆ:5-15: ಪುತ್ತೂರಿನ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ವಜ್ರಾಭರಣಗಳ ಪ್ರದರ್ಶನ
ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ಸೆ.5ರಂದು ವಜ್ರಾಭರಣಗಳ ಪ್ರದರ್ಶನ ನಡೆಯಲಿದೆ.
ಸೆ.5ರಂದು ಸಂಜೆ ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ, ಕೋಡಿಂಬಾಡಿ ರೈ ಎಸ್ಟೇಟ್‌ನ ಸುಮಾ ಅಶೋಕ್ ರೈ ವಜ್ರಾಭರಣಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಡಾ.ಹಬೀನಾ ಶಾಯಿರಾ, ವಿಕ್ಟೋರಿಯಾ ಝೋನಲ್ ಕ್ಲಬ್ ಸದಸ್ಯೆ ಆಶಾ ಡಿಸೋಜಾ, ಸುಶ್ಮಾ ವಿ ಜೈನ್ ವಿಜಯವನ, ಸುಮಯ್ಯ ನವಾಝ್ ಪುತ್ತೂರು ಹಾಗೂ ನಸ್ರತ್ ಬಶೀರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸೆ.5ರಿಂದ ಸೆ.15ರ ವರೆಗೆ ನಡೆಯುವ ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್ಸ್‌ಪೋ ವೀಕ್ಷಿಸಲು ಮತ್ತು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ವಜ್ರಾಭರಣಗಳ ಬೃಹತ್ ಪ್ರದರ್ಶನದ ಸದುಪಯೋಗಪಡೆದುಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್&ಗೋಲ್ಡ್ ಪುತ್ತೂರು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.