ವಿಟ್ಲ: ಅನ್ಯಕೋಮಿನ ಎರಡು ಜೋಡಿ ಪತ್ತೆ: ಪೊಲೀಸ್ ವಶಕ್ಕೆ
ವಿಟ್ಲ: ಎರಡು ಅನ್ಯಕೋಮಿನ ಜೋಡಿ ಪತ್ತೆಯಾದ ಘಟನೆ ನಡೆದಿದೆ. ವಿಟ್ಲದ ಅಳಕೆಮಜಲಿನ ನಿನ್ನಿಕಲ್ಲು ಬಳಿ ಸಂಜೆ ವೇಳೆ ಯುವತಿಯರೊಂದಿಗೆ ಯುವಕರು ಸರಸ ಸಲ್ಲಾಪ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದ ಊರಿನ ಜನ ಸೇರಿ ವಿಟ್ಲ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂ ಹುಡುಗಿ ಕಬಕ ಮೂಲದವಳು ಎನ್ನಲಾಗಿದೆ.