ಟೆಸ್ಟ್ ಕ್ರಿಕೆಟ್: ದಾಖಲೆ ಬರೆದ ಇಂಗ್ಲೆಂಡ್ ತಂಡದ ಜೋ ರೂಟ್
ಶ್ರೀಲಂಕಾ ವಿರುದ್ಧ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಇಂಗ್ಲಂಡ್ ತಂಡದ ಜೋ ರೂಟ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಶತಕ ಗಳಿಸಿದ್ದ ಅಲಿಸ್ಟರ್ ಕುಕ್ ದಾಖಲೆ ಮುರಿದರು.
ಇಂಗ್ಲೆಂಡ್ ನ ಮಾಜಿ ನಾಯಕ ಅಲಿಸ್ಟರ್ ಕುಕ್ ಅವರು 33 ಟೆಸ್ಟ್ ಶತಕ ಬಾರಿಸಿದ್ದರು. ಇದುವರೆಗೆ ಇಂಗ್ಲೆಂಡ್ ಆಟಗಾರನೋರ್ವ ಗಳಿಸಿದ್ದ ಅತಿ ಹೆಚ್ಚು ಟೆಸ್ಟ್ ಶತಕ ಇದಾಗಿತ್ತು. ಇದೀಗ ರೂಟ್ 34ನೇ ಶತಕದೊಂದಿಗೆ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಜೋ ರೂಟ್ ಅವರು ಸಾಧ್ಯ ಅದ್ಭುತ ಫಾರ್ಮ್ ನಲ್ಲಿದ್ದು ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಅವರು ತನ್ನ 145ನೇ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ದಾಖಲೆ ಭಾರತದ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದು ಜೋ ರೂಟ್ 6ನೇ ಸ್ಥಾನದಲ್ಲಿದ್ದಾರೆ.