ಬರೋಬ್ಬರಿ 50 ಟನ್ ಚಿನ್ನದ ರಾಶಿ ಪತ್ತೆ,ಇಡೀ ಅರ್ಥ ವ್ಯವಸ್ಥೆಯನ್ನೇ ಗಟ್ಟಿಗೊಳಿಸುವಷ್ಟು ಚಿನ್ನ ಸಿಕ್ಕೆದ್ದೆಲ್ಲಿ ಗೊತ್ತಾ?
ಬರೊಬ್ಬರಿ 50 ಟನ್ ಚಿನ್ನ ಇರುವ ಸಾಧ್ಯತೆಯುಳ್ಳ ಮತ್ತು ಇಡೀ ಅರ್ಥ ವ್ಯವಸ್ಥೆಯನ್ನೇ ಗಟ್ಟಿಗೊಳಿಸುವಷ್ಟು ಚಿನ್ನ ಚೀನಾದಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಪೂರ್ವ ಚೀನಾದ ಶಾಂಡೋಂಗ್ ಪ್ರಾಂತ್ಯದ ರುಶಾನ್‌ನಲ್ಲಿರುವ ಕ್ಸಿಲಾಕೌ ಚಿನ್ನದ ಗಣಿಯಲ್ಲಿ 50 ಟನ್‌ಗಳ ಅಂದಾಜು ಮೀಸಲು ಹೊಂದಿರುವ ಅತಿ ದೊಡ್ಡ ಚಿನ್ನದ ನಿಕ್ಷೇಪವನ್ನು ಚೀನಾ ಪತ್ತೆ ಮಾಡಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿದೆ.
ನೀವು 50 ಟನ್ ಚಿನ್ನವನ್ನು ಮಾರುಕಟ್ಟೆಯ ಮೌಲ್ಯದಲ್ಲಿ ನೋಡುವುದಾದರೆ ಅಂದಾಜು 3 ಟ್ರಿಲಿಯನ್ ಡಾಲರ್‌ನಷ್ಟು ಬೆಲೆಬಾಳುವುದಾಗಿದೆ.
ಈ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಚಿನ್ನದ ಅದಿರನ್ನು ಹೊಂದಿದ್ದು ಇದನ್ನು ಸುಲಭವಾಗಿ ಗಣಿಗಾರಿಕೆ ಮಾಡಬಹುದು ಮತ್ತು ಸಂಸ್ಕರಿಸಬಹುದು ಎಂದು ಸ್ಥಳೀಯ ಸಂಪನ್ಮೂಲ ಇಲಾಖೆ ತಿಳಿಸಿದೆ.