ಪತಿಯಿಂದ ಪತ್ನಿಯ ಕೊಲೆ
ಉಡುಪಿ: ಪತ್ನಿಯನ್ನು ಪತಿ ಕೊಲೆಗೈದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡದಲ್ಲಿ ನಡೆದಿದೆ. ಬೀದರ್ ದೊಣಗಪುರ ಮೂಲದ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆ ನಿವಾಸಿ ಜಯಶ್ರೀ(31) ಕೊಲೆಗೀಡಾದ ಮಹಿಳೆ ಎಂದು ತಿಳಿದು ಬಂದಿದೆ.
ಕೊಲೆ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯ(44) ಎಂಬಾತನನ್ನು ಕೋಟ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.