ಜಿಲ್ಲಾ ಬಿಜೆಪಿ ನೂತನ ಉಪಾಧ್ಯಕ್ಷ ಪ್ರಸನ್ನ ಮಾರ್ತ ಪುತ್ತೂರು ಬಿಜೆಪಿ ಕಛೇರಿಗೆ ಭೇಟಿ, ಸ್ವಾಗತ
ಪುತ್ತೂರು: ದ.ಕ ಜಿಲ್ಲಾ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸನ್ನ ಮಾರ್ತ ರವರು ಪುತ್ತೂರು ಬಿಜೆಪಿ ಕಛೇರಿಗೆ ಭೇಟಿ ನೀಡಿದರು.
ಮಂಡಲದ ವತಿಯಿಂದ ಗ್ರಾಮಾಂತರ ಮತ್ತು ನಗರ ಮಂಡಲ ಅಧ್ಯಕ್ಷರುಗಳಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಗನ್ನಿವಾಸ್ ರಾವ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು, ಸುರೇಶ್ ಪುತ್ತೂರಾಯ ಮತ್ತಿತರ ಪ್ರಮುಖರು ಸ್ವಾಗತಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷರುಗಳಾದ ಶಿವಕುಮಾರ್ ಮತ್ತು ದಯಾನಂದ ಶೆಟ್ಟಿಯವರು ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ ಹಾಗೂ ಉಪಾಧ್ಯಕ್ಷರಾಗಿ ನಿಯೋಜಿತರಾಗಿರುವ ಹರಿಪ್ರಸಾದ್ ಯಾದವ್, ಯುವರಾಜ್ ಪೆರಿಯತ್ತೋಡಿ, ಪ್ರಧಾನಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ನಿಯೋಜಿತ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು,ಅನಿಲ್ ತೆಂಕಿಲ, ಕಾರ್ಯದರ್ಶಿಯಾಗಿ ನಿಯೋಜಿತರಾಗಿರುವ ಪುನೀತ್ ಮಾಡತ್ತಾರು, ನಗರಸಭಾ ಸದಸ್ಯರಾದ ಶಶಿಕಲಾ, ಯುವಮೋರ್ಚ ನಗರ ಅಧ್ಯಕ್ಷರಾದ ನಿತೇಶ್ ಗೋವರ್ಧನ್ ನಗರ, ರೈತಮೋರ್ಚ ಅಧ್ಯಕ್ಷರಾದ ಸುರೇಶ್ ಕಣ್ಣರಾಯ, ಮಹಾಬಲ ರೈ, ಶರತ್ ಚಂದ್ರ ಬೈಪಡಿತ್ತಾಯ, ಜಯರಾಮ ವರ್ಮ, ಮಹಾಲಿಂಗ ಪಾಟಾಳಿ, ಜಿಲ್ಲಾ ರೈತಮೋರ್ಚಾದ ಕಿಶೋರ್ ಬೇರಿಕೆ ಮೊದಲಾದವರು ಉಪಸ್ಥಿತರಿದ್ದರು.