ಬಿ.ಸಿ ರೋಡ್: ಬೈಕ್ ಕಳವು
ಬಿ.ಸಿ ರೋಡಿನ ಹಳೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ ಕಳವುಗೈದಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿ ಮೋಹನ್ ಎಂಬವರಿಗೆ ಸೇರಿದ ಬೈಕ್ ಕಳವಾಗಿದೆ. ಇವರು ಆ.19ರಂದು ಬಂಟ್ವಾಳ ಹಳೆ ತಾಲೂಕು ಕಛೇರಿ ಬಳಿ ತನ್ನ ಪಲ್ಸರ್ ಬೈಕ್ ನ್ನು ನಿಲ್ಲಿಸಿ ಹೋಗಿದ್ದು ಅದೇ ದಿನ ರಾತ್ರಿ ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಅಲ್ಲಿರಲಿಲ್ಲ. ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಕಳವಾದ ಬೈಕ್ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.