42 ಮಹಿಳೆಯರನ್ನು ಹತ್ಯೆ ಮಾಡಿದ್ದ ಸರಣಿ ಹಂತಕ ಜೈಲಿನಿಂದ ಪರಾರಿ
42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿ ಕ್ವಾರಿಗೆ ಎಸೆದ ಕೀನ್ಯಾದ ಸರಣಿ ಹಂತಕ ಕಾಲಿನ್ಸ್ ಜುಮೈಸಿ ಖಲುಶಾ ಆ.19ರಂದು ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ
ನೈರೋಬಿ ಸರಣಿ ಹಂತಕ 33 ವರ್ಷದ ಖಲುಶಾ 9 ಮಹಿಳೆಯರ ಮೃತದೇಹಗಳು ನೈರೋಬಿಯ ಕ್ವಾರಿಯೊಂದರಲ್ಲಿ ಪತ್ತೆಯಾದ ಬಳಿಕ ಭಾರಿ ಕಾರ್ಯಾಚರಣೆ ನಡೆಸಿದ ಕೀನ್ಯಾ ಪೊಲೀಸರು ಖಲುಶಾನನ್ನು ಬಂಧಿಸಿದ್ದರು. ಆದರೆ ಈಗ ಆತ ಜೈಲಿನಿಂದ ಪರಾರಿಯಾಗಿದ್ದಾನೆ.
ಪ್ರೇಮ ವೈಫಲ್ಯದ ಬಳಿಕ ಆತ ಮಹಿಳೆಯರಿಗೆ ಆಮಿಷ ತೋರಿಸಿ ನಂತರ ಅವರನ್ನು ಭೀಕರವಾಗಿ ಹತ್ಯೆಗೈದು ಕ್ವಾರಿಗೆ ಎಸೆಯುತ್ತಿದ್ದ ಆತ ತನ್ನ ಪತ್ನಿಯನ್ನು ಕೂಡಾ ಹತ್ಯೆ ಮಾಡಿದ್ದ. ಭದ್ರತೆ ಇರುವ ಜೈಲಿನಿಂದ ಹಂತಕ ತಪ್ಪಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದ್ದು ಆತ ಪರಾರಿಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿನ ಜನತೆ ಕೂಡಾ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.