ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಗಾರ
ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ಸರ್ವೆ ಎಸ್ ಜಿ ಎಂ ಪ್ರೌಢ ಶಾಲೆಯಲ್ಲಿ ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಗಾರ ಆ.20ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾ.ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಮಧ್ಯೆ ಗೊಂದಲಗಳು ನಿರ್ಮಾಣವಾಗದ ರೀತಿಯಲ್ಲಿ ತಮ್ಮ ಅಗತ್ಯ ಪಾಠದ ಕಡೆಗೆ ಹೆಚ್ಚು ಗಮನ ಹರಿಸಬೇಕು, ಕಾನೂನು ತೊಡಕುಗಳ ಬಗ್ಗೆ ಅರಿತು ಜೀವಿಸಬೇಕು,
ಒಬ್ಬ ವಿದ್ಯಾರ್ಥಿಯು ತನಗೆ 18 ವರ್ಷ ತುಂಬಿದಾಗ ಮೊಬೈಲ್ ಸಿಮ್ ಪಡೆಯುವ ಹಕ್ಕುದಾರನಾದ ಸಂದರ್ಭದಲ್ಲಿ ತನ್ನ ಹೆಸರಿನಲ್ಲಿ ಮತ್ತೊಬ್ಬರಿಗೆ ಸಿಮ್ ಖರೀದಿಸಿ ಕೊಟ್ಟರೆ ಅದರಿಂದ ಆಗುವ ಅನಾಹುತದ ಬಗ್ಗೆ ವಿವರಿಸಿದರು.
ಜಿಲ್ಲಾ ಶಿಕ್ಷಣ ಒಕ್ಕೂಟದ ಅಧ್ಯಕ್ಷೆ ನಯನಾ ರೈ ಮಾತನಾಡಿ ಮಕ್ಕಳು ಲೈಂಗಿಕ ಸಮಸ್ಯೆಗೆ ಒಳಾಗಾಗುವ ಸಂದರ್ಭ ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಬಗ್ಗೆ ವಿವರಿಸಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ವತ್ಸಲಾ ನಾಯಕ್ ಮಾತನಾಡಿ ಬಳಿಕ ಹಾಡಿನ ಮೂಲಕ ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ಮಕ್ಕಳಲ್ಲಿ ಹುಮ್ಮಸ್ಸು ಮೂಡಿಸಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷೆ ನ್ಯಾಯವಾದಿ ಹರಿಣಾಕ್ಷಿ ರೈ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷರು, ಜಿಲ್ಲಾ ಸಮನ್ವಯ ವೇದಿಕೆ ಉಪಾಧ್ಯಕ್ಷರು ಆಗಿರುವ ಪ್ರವೀಣ್ ಆಚಾರ್ಯ ನರಿಮೊಗರು, ಸದಸ್ಯರಾದ ಹಮೀದ್ ಮಾಂತೂರು, ಭಾಸ್ಕರ, ಪ್ರೇಮಲತಾ ಕುದ್ಮಾರು, ಸುಮತಿ ಕುದ್ಮಾರು, ಮುಖ್ಯ ಶಿಕ್ಷಕ ಸೋಮಶೇಕರ್ ಉಪಸ್ಥಿತರಿದ್ದರು.
ರಕ್ಷಿತಾ ರೈ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು.