ಸುಳ್ಯ: ಕಳಂಜದಲ್ಲಿ ನೇಣು ಬಿಗಿದು ವೃದ್ಧೆ ಆತ್ಮಹತ್ಯೆ
ಸುಳ್ಯ: ತಾಲೂಕಿನ ಕಳಂಜ ಗ್ರಾಮದ ಕೋಟೆಮುಂಡುಗಾರಿನಲ್ಲಿ ವೃದ್ದೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.30 ರಂದು ನಡೆದಿದೆ.

ಕೋಟೆಮುಂಡುಗಾರು ದಿ.ಗೋವಿಂದ ನಾಯ್ಕ ಎಂಬವರ ಪತ್ನಿ ಪಾರ್ವತಿ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ವಯೋ ಸಹಜ ಖಾಯಿಲೆ ಮತ್ತು ಕಣ್ಣಿನ ಖಾಯಿಲೆಯಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇವರಿಗೆ 80 ವರ್ಷ ಪ್ರಾಯವಾಗಿತ್ತು.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.