ಆ.18: SKSSF ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಮಜ್ಲಿಸುನ್ನೂರ್, ಪ್ರಾರ್ಥನಾ ಸಂಗಮ
ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ಇದರ ವತಿಯಿಂದ ಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ವಯನಾಡ್ ದುರಂತದಲ್ಲಿ ಮಡಿದವರ ಹೆಸರಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಂಗಮ ಆ.18 ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅರಂತೋಡು ಬದ್ರಿಯಾ ಜಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಿಮನೆ ಆಗಮಿಸಲಿದ್ದಾರೆ. ಮಜ್ಲಿಸುನ್ನೂರು ನೇತ್ವತವನ್ನು ಎಂ ಜೆ ಮಸೀದಿ ಖತೀಬ್ ರಾದ ನಹೀಂ ಫೈಝಿ ಉಸ್ತಾದ್ ನಿರ್ವಹಿಸಲಿದ್ದಾರೆ. ಅದ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೀದ್ ಮುಸ್ಲಿಯಾರ್ ಹಾಗೂ ಹಾರಿಸ್ ಹಝರಿ ಉಸ್ತಾದ್ ಸೇರಿದಂತೆ ಹಲವಾರು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಹನೀಫ್ ಮೊಟ್ಟಂಗಾರ್ ತಿಳಿಸಿದ್ದಾರೆ.