ಆ.17: ಎಜುಕೇಷನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ ಪುತ್ತೂರಿನಲ್ಲಿ ವಿದ್ಯಾರ್ಥಿ ಆ್ಯಪ್ ಪ್ರೀ ಲಾಂಚ್ ಕಾರ್ಯಕ್ರಮ
ಪುತ್ತೂರು: ಹೊಸ ವಿದ್ಯಾರ್ಥಿ ನೋಂದಣಿ ಮತ್ತು ಕೌನ್ಸೆಲಿಂಗ್ ವ್ಯವಸ್ಥೆಯ ಆ್ಯಪ್ ಬಿಡುಗಡೆಗೆ ಕಾರ್ಯಕ್ರಮ ಆಗಸ್ಟ್ 17ರಂದು ಸಂಜೆ 4 ಗಂಟೆಗೆ ಪುತ್ತೂರು ಮಹಾವೀರ ಮಾಲ್’ನ ನೆಲ ಅಂತಸ್ತಿನಲ್ಲಿ (ರಿಲಯನ್ಸ್ ಟ್ರೆಂಡ್ ಕೆಳಗಡೆ) ನಡೆಯಲಿದೆ.
ಅತಿಥಿಗಳಾಗಿ ಡಾ. ಸಂತೋಷ್ ಕುಮಾರ್ ಕೆಎಎಸ್, ಎಡಿಸಿ ದ.ಕ, ಮೌಂಟನ್ ವ್ಯೂ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಪುತ್ತೂರು ಇದರ ಮುಖ್ಯಸ್ಥ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್, ಖ್ಯಾತ ಮೋಟಿವೇಷನಲ್ ಸ್ಪೀಕರ್ ರಫೀಕ್ ಮಾಸ್ಟರ್ ಮಂಗಳೂರು, ದ.ಕ ಜಿಲ್ಲೆ ಮಾಹಿತಿ ಮತ್ತು ಸಾರ್ವಜನಿಕರ ಸಂಪರ್ಕಾಧಿಕಾರಿ ಬಿ.ಎ ಖಾದರ್ ಶಾ ಭಾಗವಹಿಸಲಿದ್ದಾರೆ.
ಈ ಸಾಫ್ಟ್‌ವೇರ್ ಆಧಾರಿತ ಪ್ಲಾಟ್‌ಫಾರ್ಮ್ ವಿದ್ಯಾರ್ಥಿಗಳಿಗೆ ಸುಲಭವಾಗಿ ನೋಂದಾಯಿಸಲು ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಆರ್ಥಿಕ ಸಹಕಾರವನ್ನು ಪಡೆಯಲು ಅವಕಾಶ ನೀಡುತ್ತದೆ. ನೂರು ಶೇಕಡ ಪಾರದರ್ಶಕತೆ ಇದರ ಪ್ರಮುಖ ವಿಶೇಷತೆಯಾಗಿದ್ದು, ಅದನ್ನು ದೃಢವಾದ ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಸಾಧಿಸಲಾಗುತ್ತದೆ. ಆಗಸ್ಟ್ 17ರಂದು ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಹಾಗೂ ಇಇಎಫ್ ಒದಗಿಸುವ ಸೇವೆ ಮತ್ತು ಸಹಕಾರವನ್ನು ಪಡೆಯುವಂತೆ ಎಜುಕೇಷನಲ್ ಎಕ್ಸೆಲೆನ್ಸ್ ಫೌಂಡೇಶನ್ (ಇಇಎಫ್) ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.