ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯ

ಶ್ರೀಲಂಕಾ ವಿರುದ್ಧ ಸೋಲು: ಟೀಕೆಗೊಳಗಾದ ಟೀಂ ಇಂಡಿಯಾ ನೂತನ ಕೊಚ್ ಗಂಭೀರ್





ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಮ್ ಇಂದ ನಿರಾಶದಾಯಕ ಪ್ರದರ್ಶನ ನೀಡುತ್ತಿದ್ದು ಮೊದಲ ಪಂದ್ಯ ಟೈಗೊಂಡರೆ ಎರಡನೇ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಶ್ರೀಲಂಕಾ ತಂಡ ಒಡ್ಡಿದ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಲಾರದೆ ಟೀಮ್ ಇಂಡಿಯಾ ಆಟಗಾರರು ಚಡಪಡಿಸುತ್ತಿದ್ದಾರೆ.

ಈತನ್ಮಧ್ಯೆ ತಂಡದ ಈ ನಿರಾಶದಾಯಕ ಪ್ರದರ್ಶನಕ್ಕೆ ನೂತನ ಕೋಚಿ ಗೌತಮ್ ಗಂಭೀರ್ ಅವರೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ತಂಡದಲ್ಲಿ ಮಾಡುತ್ತಿರುವ ಮಿತಿ ಮೀರಿದ ಪ್ರಯೋಗಗಳೇ ತಂಡದ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವ ಟೀಕೆ ಕೇಳಿ ಬಂದಿದೆ. ದ್ವಿತೀಯ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ದುಬೆ ಅವರನ್ನು ಕಣಕ್ಕಿಳಿಸಿದ್ದು ದುಬೆ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು. 6ನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಮತ್ತು 7ನೇ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ ಅವರನ್ನು ಕಣಕ್ಕಿಳಿಸುವ ಮೂಲಕ ತಂತ್ರಗಾರಿಕೆಯ ಪ್ರಯೋಗ ಮಾಡಲಾಗಿತ್ತು. ಆದರೆ ಆ ಪ್ರಯೋಗಗಳೆಲ್ಲ ಕೈ ಕೊಟ್ಟಿದೆ. ಆಟಗಾರರ ಸ್ಥಿರ ಪ್ರದರ್ಶನದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದು ನೂತನ ಕೋಚ್ ಗೌತಮ್ ಗಂಭೀರ್ ಅವರ ಪ್ರಯೋಗವೇ ತಂಡದ ಸೋಲಿಗೆ ಕಾರಣ ಎಂದು ಹಲವರು ಟೀಕಿಸಿದ್ದಾರೆ.


ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ನಡೆದ 2023 ರ ವಿಶ್ವಕಪ್‌ನಲ್ಲಿ, ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹಾಗಾದರೆ ಕೋಚ್ ಗಂಭೀರ್, ಅಯ್ಯರ್ ಅವರನ್ನು ಏಕೆ ಕೆಳ ಕ್ರಮಾಂಕದಲ್ಲಿ ಆಡಿಸುತ್ತಿದ್ದಾರೆ? ಅದೇ ರೀತಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವೂ ಏಕೆ ಬದಲಾಗುತ್ತಿದೆ? ಎಂಬುದು ಅರ್ಥವಾಗದ ವಿಚಾರ ಎನ್ನುವ ಮಾತುಗಳು ಕೇಳಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!