ಚುನಾವಣೋತ್ತರ ಎಲ್ಲಾ ಎಕ್ಸಿಟ್ ಪೋಲ್‌ಗಳು ಸುಳ್ಳು: ಕೇಜ್ರಿವಾಲ್
ನವದೆಹಲಿ: ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಬಂದಿದ್ದು ಎಲ್ಲಾ ಎಕ್ಸಿಟ್ ಪೋಲ್‌ಗಳು ನಕಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ತಿಹಾರ್ ಜೈಲಿಗೆ ಹೋಗುವ ಮುನ್ನ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಬಹುಮತ ಬಂದಿದೆ. ಎಲ್ಲಾ ಎಕ್ಸಿಟ್ ಪೋಲ್‌ಗಳು ಖಂಡಿತಾ ಸುಳ್ಳು. ಫಲಿತಾಂಶ 3 ದಿನ ಮುಂಚೆಯೇ ಸುಳ್ಳಿನ ಸಮೀಕ್ಷೆ ಯಾಕೆ ಬೇಕಿತ್ತು? ಮತಎಣಿಕೆ ವೇಳೆ ಎರಡ್ಮೂರು ಸುತ್ತಿನ ಬಳಿಕ ಎದ್ದು ಹೋಗಬೇಡಿ. ಕೊನೆಯ ಸುತ್ತಿನವರೆಗೂ ಏಜೆಂಟ್‌ಗಳು ಕಾದು ನೋಡಬೇಕು ಎಂದು ಮತದಾನೋತ್ತರ ಸಮೀಕ್ಷೆ ಬಗ್ಗೆ ಕೇಜ್ರಿವಾಲ್ ಹೇಳಿದ್ದಾರೆ.