ಸೆಲ್ಫಿ ತೆಗೆಯುವ ವೇಳೆ 100 ಅಡಿ ಪ್ರವಾತಕ್ಕೆ ಬಿದ್ದ ಯುವತಿ..!
ಸೆಲ್ಫೀ ಕ್ರೇಜ್ ಯುವತಿಯೊಬ್ಬಳ ಜೀವಕ್ಕೆ ಕುತ್ತಾಗುವ ಸಾಧ್ಯತೆಯಿತ್ತು. ಸೆಲ್ಫಿ ತೆಗೆದುಕೊಳ್ಳುವಾಗ ಯುವತಿ ಕಾಲು ಜಾರಿ 100 ಅಡಿ ಪ್ರವಾತಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್ ಬೋರ್ನ್ ಘಾಟ್‌ನಲ್ಲಿ ನಡೆದಿದೆ.
ಯುವತಿ ತನ್ನ ಸ್ನೇಹಿತರೊಂದಿಗೆ ಬೋರ್ನ್ ಘಾಟ್‌ಗೆ ತೆರಳಿದ್ದ ವೇಳೆ ಭಾರೀ ಮಳೆಯಾಗುತ್ತಿದ್ದರೂ ಕೂಡಾ ಮುಂದೆ ಹೋಗಿ ಸೇಲ್ಫೀ ತೆಗೆದಿದ್ದಾರೆ ಎನ್ನಲಾಗಿದ್ದು ಈ ವೇಳೆ ಕಾಲು ಜಾರಿ 100 ಅಡಿ ಆಳಕ್ಕೆ ಬಿದ್ದಿದ್ದಾಳೆ. ಸ್ಥಳೀಯರು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಈ ರಕ್ಷಣಾ ಕಾರ್ಯಾಚರಣೆಯನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯರು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತುತ್ತಿರುವುದನ್ನು ಕಾಣಬಹುದು. ಯುವತಿ ನೋವಿನಿಂದ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಹಲವು ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ವರದಿಯಾಗಿದೆ.