ದುರಂತದಿಂದ ನಲುಗಿ ಹೋಗಿರುವ ವಯನಾಡಿನಲ್ಲಿ ಕಳ್ಳರ ಹಾವಳಿ.!?
ವಯನಾಡು: ಭೂಕುಸಿತ, ಪ್ರವಾಹ ದುರಂತದಿಂದ ನಲುಗಿ ಹೋಗಿರುವ ಕೇರಳದ ವಯನಾಡಿನಲ್ಲಿ ಇದೀಗ ಕಳ್ಳರ ಹಾವಳಿ ಶುರುವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭೂಕುಸಿತದಲ್ಲಿ ನಿರಾಶ್ರಿತವಾಗಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ಬೇರೆಡೆ ತಂಗಿರುವವರ ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದು ಮನೆಯಲ್ಲಿರುವ ಅಮೂಲ್ಯ ಕೆಲವು ವಸ್ತುಗಳು ನಾಪತ್ತೆಯಾಗಿವೆ ಎಂದು ವರದಿಯಾಗಿದೆ.
ದುರಂತ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸೇನೆ ಸಹಿತ ವಿವಿಧ ಸಂಘಟನೆಗಳು ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಅದರೆಡೆಯಲ್ಲಿ ಕಳ್ಳರು ಕೂಡಾ ಆ ಪ್ರದೇಶಕ್ಕೆ ಎಂಟ್ರಿ ಆಗಿರುವುದು ತಲೆ ನೋವು ತಂದಿದೆ. ಇಂತಹ ಪರಿಸ್ಥಿತಿಯಲ್ಲೂ ಕಳ್ಳತನ ನಡೆಸುವ ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.