ರಾಷ್ಟ್ರೀಯ

‘ಲವ್ ಜಿಹಾದ್’ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಶೀಘ್ರದಲ್ಲೇ ಹೊಸ ಕಾನೂನು: ಹಿಮಂತ ಬಿಸ್ವಾ

‘ಲವ್ ಜಿಹಾದ್’ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ತಮ್ಮ ಸರ್ಕಾರ ಶೀಘ್ರದಲ್ಲೇ ಹೊಸ ಕಾನೂನನ್ನು ಪರಿಚಯಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ನಾವು ಲವ್ ಜಿಹಾದ್’ ಬಗ್ಗೆ ಮಾತನಾಡಿದ್ದೆವು, ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ಶೀಘ್ರದಲ್ಲಿಯೇ ತರುತ್ತೇವೆ ಮಾತ್ರವಲ್ಲದೇ, ಹೊಸ ವಾಸಸ್ಥಳ ನೀತಿಯನ್ನು ಪರಿಚಯಿಸಲಾಗುವುದು, ಇದರಡಿ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!