ಅರಂತೋಡು: ರಿವರ್ಸ್ ತೆಗೆಯುವ ವೇಳೆ ಲಾರಿ ಡಿಕ್ಕಿ: ಪಾನ್ ಸ್ಟಾಲ್ ಗೆ ಹಾನಿ
ಸುಳ್ಯ: ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತದ್ದ ಹೋಟೆಲ್ ಮುಂಬಾಗ ಲಾರಿ ಹಿಂದುಗಡೆ ತೆಗೆಯುವ ವೇಳೆ ತಡೆಗೋಡೆಗೆ ಗುದ್ದಿ ಪಕ್ಕದಲ್ಲಿದ್ದ ಪಾನ್ ಸ್ಟಾಲ್ ಗೆ ಗುದ್ದಿ ಹಾನಿಯಾದ ಘಟನೆ ಆರಂತೋಡಿನಿಂದ ವರದಿಯಾಗಿದೆ.
ಲಾರಿ ಚಾಲಕ ರಾತ್ರಿ ಸುಳ್ಯದಲ್ಲಿ ಮೊಬೈಲ್ ಪೋನ್ ಬಿಟ್ಟು ಬಂದು ಅವರಿಗೆ ಅರಂತೋಡು ತಲುಪುವಾಗ ನೆನಪು ಬಂದು ಲಾರಿಯನ್ನು ತೆಕ್ಕಿಲ್ ಕಾಂಪ್ಲೆಕ್ಸ್ ಮುಂಬಾಗ ಹಿಂದುಗಡೆ ತೆಗೆಯುವಾಗ ತಡೆಗೋಡೆಗೆ ಗುದ್ದಿತೆನ್ನಲಾಗಿದೆ. ಹೋಟೆಲ್ ಬೋರ್ಡ್ ಹಾಗೂ ಪಂಚಾಯತ್ ಕಸದ ತೊಟ್ಟಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.