ಪಾಪೆಮಜಲು: ಭಾರೀ ಮಳೆಗೆ ಮನೆಯ ಮಾಡು ಕುಸಿತ
ಪುತ್ತೂರು: ನಿರಂತರ ಸುರಿಯಯುತ್ತಿರುವ ಭಾರೀ ಮಳೆಗೆ ಅರಿಯಡ್ಕ ಗ್ರಾಮದ ಪಾಪೆಮಜಲು ಎಂಬಲ್ಲಿ ವೆಂಕಪ್ಪ ನಾಯ್ಕ ಎಂಬವರ ಮನೆಯ ಮಾಡು ಕುಸಿತಕ್ಕೊಳಗಾಗಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಅರಿಯಡ್ಕ ಗ್ರಾಮ ಆಡಳಿತಾಧಿಕಾರಿ ಗೋಪಿನಾಥ, ಗ್ರಾ.ಪಂ ಕಾರ್ಯದರ್ಶಿ ಶಿವರಾಮ ಮೂಲ್ಯ, ಸಿಬ್ಬಂದಿ ಪ್ರಭಾಕರ್, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಭೇಟಿ ನೀಡಿದ್ದಾರೆ.