ಕರಾವಳಿರಾಜ್ಯ

ಮುಖ್ಯಮಂತ್ರಿ‌ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ



ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.


ಸುಮಾರು‌ ಅರ್ಧ ಗಂಟೆಗಳ ಕಾಲ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು. ಕಾಲೇಜು‌ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ
ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!