ಮಗುವಿನೊಂದಿಗೆ ಕೆರೆಗೆ ಹಾರಿದ ತಾಯಿ!! ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ದೂರು
ಪುತ್ತೂರು ತಾಲೂಕಿನ ರುಕ್ಮಯ್ಯ ಗೌಡ (66) ಅವರ 34 ವರ್ಷದ ಮಗಳು ಆಕೆಯ 3 ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಮೃತ ಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಸಂಬಂಧ ಮೃತ ಮಹಿಳೆಯ ತಂದೆಯಾದ ರುಕ್ಮಯ್ಯ ಗೌಡ ಅವರು ನೀಡಿದ ದೂರಿನ ಅನ್ವಯ, ದಿನಾಂಕ 04-01-2026ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 0 103 BNS-2023ರಂತೆ ದಾಖಲಾಗಿದೆ.
ಈ ಘಟನೆಗೆ ಸಂಬಂದಿಸಿದಂತೆ ತನ್ನ ಮಗಳ ಮರಣದಲ್ಲಿ ಸಂಶಯವಿದೆ ಎಂದು ರತ್ನಾವತಿ (55 ವ) ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಿನಾಂಕ 4.1.20260ರಂದು ಯು.ಡಿ.ಆರ್ ನಂಬ್ರ 01/2026 ಕಲಂ: 194(3)(i)(iv) BNSS-2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಗೆ ಸಂಬಂದಿಸಿದಂತೆ ಮೇಲಿನ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





