ಕಲಬುರಗಿ: ಸಪ್ತಗಿರಿ ಆರೇಂಜ್ ಹೋಟೆಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹತ್ತು ಕಾರ್ಮಿಕರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.
ಬೆಳಿಗ್ಗೆ ಅಂದಾಜು 6 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದ್ದು ಇಬ್ಬರನ್ನು ಜಿಮ್ಸ್ನ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಜಿಮ್ಸ್ ಸಾಮಾನ್ಯ ವಾರ್ಡ್ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.