ಅಂತಾರಾಷ್ಟ್ರೀಯ

ಹಜ್ ಯಾತ್ರೆ ಕೈಗೊಂಡ 550ಕ್ಕೂ ಅಧಿಕ ಮಂದಿ ಮೃತ್ಯು

ಪವಿತ್ರವಾದ ಹಜ್ ಯಾತ್ರೆಗೆ ತೆರಳಿದವರಲ್ಲಿ 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರಾಗಿದ್ದು, ಶಾಖ-ಸಂಬಂಧಿತ ಉಷ್ಣತೆಯ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಒಬ್ಬರು ಯಾತ್ರೆ ವೇಳೆ ಬಿದ್ದು ಗಾಯಗೊಂಡು ಪ್ರಾಣಕಳೆದುಕೊಂಡಿದ್ದು ಹೊರತುಪಡಿಸಿ ಮೃತಪಟ್ಟ ಈಜಿಪ್ಟ್ ಯಾತ್ರಿಕರೆಲ್ಲರೂ ಶಾಖ ಸಂಬಂಧಿತ ಸಮಸ್ಯೆಯಿಂದ ಅಸುನೀಗಿದ್ದಾರೆ. ವಿವಿಧ ದೇಶಗಳಿಂದ ಲಕ್ಷಾಂತರ ಮಂದಿ ಯಾತ್ರಿಕರು ಆಗಮಿಸಿ ಹಜ್ ಕರ್ಮ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!