ಯಾರೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು- ಅಮಿತ್ ಶಾ
ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಆದ ಬಳಿಕ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದು ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಟಿಕೆಟ್ ನ್ನು ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
ಸಂಸದೀಯ ಮಂಡಳಿಯಲ್ಲಿ ನರೇಂದ್ರ ಮೋದಿ ಮತ್ತು ನಾನು ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ತಿರ್ಮಾನ ಮಾಡಿ ಟಿಕೆಟ್ ಘೋಷಣೆಯಾಗಿದೆ. ಎಲ್ಲರೂ ಒಪ್ಪಿ ಅಭ್ಯರ್ಥಿ ಪರ ಪ್ರಚಾರ ಶುರು ಮಾಡಿ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು. ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಈಗ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಿರಬೇಕು ಎಂದು ಅಮಿತ್ ಶಾ ಕರೆ ಕೊಟ್ಟಿದ್ದಾರೆ.