ಬಿ.ಜೆ.ಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾ ಉಪಾಧ್ಯಕ್ಷರಾಗಿ ಪುತ್ತೂರಿನ ರಫೀಕ್ ದರ್ಬೆ ಆಯ್ಕೆ
ಪುತ್ತೂರು: ಬಿಜೆಪಿ ದ.ಕ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ನೂತನ ಉಪಾದ್ಯಕ್ಷರಾಗಿ ರಫೀಕ್ ದರ್ಬೆ ಆಯ್ಕೆಯಾಗಿದ್ದಾರೆ. ರಫೀಕ್ ದರ್ಬೆಯವರನ್ನು ಪುತ್ತೂರು ನಗರ ಮಂಡಲದ ಸಮ್ಮುಖದಲ್ಲಿ ನಗರ ಮಂಡಲದ ಅದ್ಯಕ್ಷರಾದ ಶಿವಕುಮಾರ್ ಪಿ.ಬಿ ಅವರು
ನಗರ ಮಂಡಲದ ಪದಾಧಿಕಾರಿಗಳ, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ ಮತ್ತು ವಿವಿಧ ಮೋರ್ಛಾಗಳ ಮೊದಲ ಸಭೆಯಲ್ಲಿಬಿಜೆಪಿ ಶಾಲು ಹಾಕಿ ಅಭಿನಂದಿಸಿದರು.
ದ.ಕ ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾ ರಚನೆಯಾಗಿದ್ದು 25 ಜನರ ಸಮಿತಿ ರಚಿಸಲಾಗಿದೆ. ಪುತ್ತೂರು ತಾಲೂಕಿನಿಂದ ಸೌಕತ್ ಆಲಿ ಹೀರೆಬಂಡಾಡಿ ಮತ್ತು ಉಮ್ಮರಬ್ಬ ಕೆದಿಲ ಇವರನ್ನು ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ಸದಸ್ಯರಾಗಿ ಮತ್ತು ರಫೀಕ್ ದರ್ಬೆ ಯವರನ್ನು ಉಪಾದ್ಯಕ್ಷರಾಗಿ ಮೋರ್ಛಾ ಜಿಲ್ಲಾ ಅಧ್ಯಕ್ಷರಾದ ಟಿ.ಎ ಶಾನವಾಜ್ ರವರು ಬಿಜೆಪಿ ಪಕ್ಷದ ವರಿಷ್ಕರ ತೀರ್ಮಾನದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ.