ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ
ಪುತ್ತೂರು: ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ನೇಮಕಗೊಂಡಿದ್ದಾರೆ. ಸರ್ವೆ ಕಲ್ಪನೆ ಸರಕಾರಿ ಪ್ರೌಢ ಶಾಲೆಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದೀಕ್ ಸುಲ್ತಾನ್ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿದ್ದಾರೆ.
ಉಳಿದಂತೆ ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾಗಿ ಆಸ್ಕರ್ ಆನಂದ್ ಬೊಳುವಾರು, ( ಸಾಮಾನ್ಯ ) ಮುಖೇಶ್ ಕೆಮ್ಮಿಂಜೆ( ಪ ಜಾತಿ) ಅರುಣಾ ಡಿ ರೈ ಪುತ್ತೂರು( ಮಹಿಳಾ) ಸುದೇಶ್ ಆರ್ ಶೆಟ್ಟಿ( ಸಾಮಾನ್ಯ) ಅನ್ವರ್ ಖಾಲಿದ್ ಕಬಕ( ಸಾಮಾನ್ಯ) ಶೇಖರ್ ನಾಯ್ಕ ಕಬಕ( ಪ.ಪಂಗಡ) ಮತ್ತು ವಿಕ್ಟರ್ ಪಾಯಸ್ ನೆಹರೂ ನಗರ ಸಾಮಾನ್ಯ ರವರನ್ನು ನೇಮಕಗೊಳಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.