ತಾಯಿ-ಮಗುವಿನ ಮೃತದೇಹ ನದಿಯಲ್ಲಿ ಪತ್ತೆ
ಮಂಗಳೂರು: ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ. ಅಡ್ಯಾರು ಪದವಿನ ಚೈತ್ರಾ ಹಾಗೂ ಮಗು ದಿಶಾಂತ್ ಮೃತಪಟ್ಟವರು.
ಮಗುವಿನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ ತಾಯಿ ಇಂದು ಮಗುವಿನೊಂದಿಗೆ ಇಹ ಲೋಕ ತ್ಯಜಿಸಿದ್ದಾರೆ. ಮನೆಯವರು ಇಬ್ಬರಿಗಾಗಿ ಹುಡುಕಾಡಿ ಸೋಷಿಯಲ್ ಮೀಡಿಯಾದಲ್ಲೂ ಹುಡುಕಿಕೊಡಿ ಅಂತ ಕೋರಿದ್ದಾರೆ. ಆದರೆ, ಸಂಜೆ ವೇಳೆ ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.