ಪುತ್ತೂರು: ಬ್ಯಾಂಕ್ ಖಾತೆಯಿಂದ 13 ಸಾವಿರ ರೂ ಕಡಿತ: ಮಹಿಳೆಯಿಂದ ಪೊಲೀಸ್ ದೂರು
ಪುತ್ತೂರು: ನನ್ನ ಬ್ಯಾಂಕ್ ಖಾತೆಯಿಂದ 13 ಸಾವಿರ ರೂಪಾಯಿ ಬ್ಯಾಂಕ್ ಕಡಿತಗೊಂಡಿದ್ದು ಯಾರೋ ವಂಚನೆ ಮಾಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿ ಪುತ್ತೂರಿನ ಚಿಕ್ಕಮುಡ್ನೂರು ನಿವಾಸಿ ಐಡಾ ಶಾಂತಿ ಲೋಬೊ (43) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಫೆ.2ರಂದು ರಾತ್ರಿ ಐಡಾ ಶಾಂತಿ ಲೋಬೊ ಅವರ ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿ ವಂಚನೆ ಮೂಲಕ ಹಣ ಪಡೆದಿದ್ದಾರೆ. 13 ಸಾವಿರ ರೂಪಾಯಿ ಕಡಿತಗೊಂಡಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿದೆ. ಖಾತೆಯಿಂದ ಕಡಿತಗೊಂಡಿರುವ ಬಗ್ಗೆ ಐಡಾ ಶಾಂತಿ ಲೋಬೊ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.