ಬೆಳ್ತಂಗಡಿ: ಆಂಬ್ಯುಲೆನ್ಸ್ ವಾಹನಕ್ಕೆ ಕಾರು ಅಡ್ಡ ನಿಲ್ಲಿಸಿ ಚಾಲಕನಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು
ಬೆಳ್ತಂಗಡಿ: ಆಂಬ್ಯುಲೆನ್ಸ್ ವಾಹನಕ್ಕೆ ಕಾರು ಅಡ್ಡ ನಿಲ್ಲಿಸಿ ಅಂಬ್ಯುಲೆನ್ಸ್ ಚಾಲಕಗೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ನಿನಲ್ಲಿ ಮಾ.12ರಂದು ನಡೆದಿದೆ.

ಆಂಬ್ಯುಲೆನ್ಸ್ ಚಾಲಕ ಕಡಬ ತಾಲೂಕು, ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರ ನಿವಾಸಿ ರಕ್ಷಿತ್ ಕುಮಾರ್ (27.ವ) ಅವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿಯಿಂದ ಉಜಿರೆ ಕಡೆ ಹೋಗುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕಾರನ್ನು ಆದರ ಚಾಲಕ ಆಂಬ್ಯೂಲೆನ್ಸ್ ವಾಹನಕ್ಕೆ ಅಡ್ಡ ನಿಲ್ಲಿಸಿ, ಕಾರಿನ ಚಾಲಕ ಮತ್ತು ಓರ್ವ ಮಹಿಳೆ ಕಾರಿನಿಂದ ಇಳಿದು ಬಂದು ರಕ್ಷಿತ್ ಅವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಆಂಬ್ಯುಲೆನ್ಸ್ ವಾಹನಕ್ಕೆ ಸುಮಾರು 3 ಸಾವಿರ ರೂಪಾಯಿಯಷ್ಟು ಹಾನಿ ಮಾಡಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ರಕ್ಷಿತ್ ಕುಮಾರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.