ಲೋಕಸಭಾ ಚುನಾವಣೆ: ಎನ್ ಡಿ ಎ, ಬಿಜೆಪಿ ಪಡೆಯುವ ಸ್ಥಾನಗಳ ಬಗ್ಗೆ ಭವಿಷ್ಯ ನುಡಿದ ಪ್ರಧಾನಿ ಮೋದಿ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ. ಎನ್‌ಡಿಎ 400 ಸ್ಥಾನಗಳ ಗಡಿ ದಾಟಲಿದೆ. ಬಿಜೆಪಿ 370 ಸ್ಥಾನ ಗೆಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಸರ್ಕಾರದ ಮೂರನೇ ಅವಧಿ ಈಗ ಬಹಳ ದೂರವಿಲ್ಲ. ನಾನು ಅಂಕಿ ಅಂಶಗಳಿಗೆ ಹೋಗುವುದಿಲ್ಲ. ಆದರೆ ನಾನು ದೇಶದ ಮನಸ್ಥಿತಿಯನ್ನು ನೋಡುತ್ತೇನೆ. ಇದು ಎನ್‌ಡಿಎಯನ್ನು 400 ದಾಟುವಂತೆ ಮಾಡುತ್ತದೆ. ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ. ಮೂರನೇ ಅವಧಿಯು ಬಹಳ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅಬ್ ಕೀ ಬಾರ್ 400 ಪಾರ್ ಇಡೀ ದೇಶ ಹೇಳುತ್ತಿದೆ ಎಂದು ಅವರು ತಿಳಿಸಿದ್ದಾರೆ.