ಸಾಲದ ಹೊರೆ: ಮಗನನ್ನು ಮಾರಾಟ ಮಾಡಲು ಬೀದಿಯಲ್ಲಿ ಕುಳಿತ ತಂದೆ
ಸಾಲ ತೀರಿಸಲು ತಂದೆಯೊಬ್ಬ ತನ್ನ ಮಗನನ್ನೇ ಮಾರಾಟ ಮಾಡಲು ಬೀದಿಯಲ್ಲಿ ಕುಳಿತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿರುವುದು ವರದಿಯಾಗಿದೆ.
ಅಲಿಗಢ್‌ನ ರಾಡ್‌ವೇಸ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕುತ್ತಿಗೆಗೆ ಬೋರ್ಡ್ ವೊಂದನ್ನು ನೇತುಹಾಕಿ ಮಗನನ್ನು ಮಾರಾಟ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ
ನನ್ನ ಮಗ ಮಾರಾಟಕ್ಕಿದ್ದಾನೆ. ನಾನು ಅವನನ್ನು ಮಾರಾಟ ಮಾಡಲು ಬಯಸಿದ್ದೇನೆ” ಎಂದು ಕುತ್ತಿಗೆಗೆ ಬೋರ್ಡ್ ವೊಂದನ್ನು ಹಾಕಿ ರಸ್ತೆ ಬದಿ ಕುಟುಂಬದ ಜೊತೆ ಕೂತಿದ್ದಾರೆ. ಮಗನನ್ನು 6 ರಿಂದ 8 ಲಕ್ಷ ರೂ.ಗೆ ಮಾರಾಟ ಮಾಡುತ್ತೇನೆ ಎಂದು ವ್ಯಕ್ತಿ ಹೇಳಿದ್ದಾರೆ.ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವ್ಯಕ್ತಿ ಕುಟುಂಬದವರಿಂದ 50 ಸಾವಿರ ರೂಪಾಯಿಯನ್ನು ಸಾಲವಾಗಿ ತೆಗೆದುಕೊಂಡಿದ್ದರು. ಸಾಲ ವಾಪಾಸ್ ಕೊಡದ ಕಾರಣ ಕುಟುಂಬದ ನಡುವೆ ಜಗಳವಾಗಿತ್ತು. ಸಾಲವನ್ನು ವಾಪಾಸ್ ನೀಡಲು ಸಾಧ್ಯವಾಗದೆ ಇದ್ದಾಗ, ಅಂತಿಮವಾಗಿ ವ್ಯಕ್ತಿ ತನ್ನ ಮಗನನ್ನು ಮಾರಾಟ ಮಾಡುವ ಸ್ಥಿತಿಗೆ ಬಂದು ಬೀದಿಯಲ್ಲಿ ಕೂತಿದ್ದಾರೆ ಎಂದು ತಿಳಿದು ಬಂದಿದೆ.