ಕರಾವಳಿಕ್ರೈಂ

ಬೆಳ್ತಂಗಡಿ: ನಕಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಯತ್ನ, ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ: ಫೆ.2ರಂದು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ  ಮಡಂತ್ಯಾರು  ಶಾಖೆಯಲ್ಲಿ  ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ(ನಿ)ದಲ್ಲಿ ಬೆಳಿಗ್ಗೆ  2  ಗ್ರಾಹಕರು  ಬಂದು  ಅದರಲ್ಲಿ ಅಬ್ದುಲ್‌  ನಝೀರ್‌ ಎಂಬಾತನ  ಹೆಸರಿನಲ್ಲಿ  ಚಿನ್ನದ  ಸರ  ಅಡವಿಡಲು  ಇರುವುದಾಗಿ  ತಿಳಿಸಿದಂತೆ 3 ಚಿನ್ನದ  ಸರಗಳನ್ನು  ನೀಡಿದ್ದು, ಸದ್ರಿ  ಚಿನ್ನವನ್ನು  ಪರೀವೀಕ್ಷಕರಲ್ಲಿ  ಪರಿಶೀಲನೆ  ನಡೆಸಿದಾಗ, ಸದ್ರಿ  ಮೂರು  ಚಿನ್ನದ  ಸರಗಳು  ನಕಲಿ ಎಂದು  ಸಾಬೀತಾಗಿರುತ್ತದೆ.

ಈ ಬಗ್ಗೆ ಸದರಿ ಬ್ರಾಂಚ್ ನ  ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 11/2026  ಕಲಂ: 318(4) ,62 ಜೊತೆಗೆ 3(5)  BNS 2023ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳಾದ ಅಬ್ದುಲ್ ನಝೀರ್ (43) ಕುಳಿ ಗ್ರಾಮ ಬಂಟ್ವಾಳ ತಾಲೂಕು ಹಾಗೂ ಪ್ರಮೋದ್ ಪಿ. (50) ಬೋಳಂತೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!