ಸುಳ್ಯ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ; 6 ಮಂದಿ ವಶಕ್ಕೆ
ಸುಳ್ಯ: ತಾಲೂಕಿನ ಕಳಂಜ ಗ್ರಾಮದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೋಲೀಸರು ದಾಳಿ ನಡೆಸಿ 8 ಕೋಳಿ, ಕೆಲವು ಬೈಕ್ ಹಾಗೂ 6 ಜನರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಜ.31ರಂದು ಮಧ್ಯಾಹ್ನ, ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜ ಮಾಡದ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ, ದಾಳಿ ನಡೆಸಿದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ಸೈ ಸಂತೋಷ್ ಬಿ.ಪಿ, ಮತ್ತು ಪೊಲೀಸ್ ಸಿಬ್ಬಂದಿಗಳು, ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳಾದ ತಾರನಾಥ, ಐತ್ತ, ಹರೀಶ್, ಕೌಶಿಕ್, ಸುನಿಲ್, ಸುಧೀರ್ ಎಂಬವರನ್ನು ವಶಕ್ಕೆ ಪಡೆದು, ಜೂಜಿಗೆ ಬಳಸಿದ ನಗದು ಹಣ ರೂ 1,300/-, ಅಂಕದ ಕೋಳಿಗಳು -8, ಕೋಳಿಯ ಕಾಲುಗಳಿಗೆ ಕಟ್ಟಿದ್ದ ಕತ್ತಿ -4 ಹಾಗೂ ಸ್ಥಳದಲ್ಲಿದ್ದ 9 ಮೊಟಾರು ಸೈಕಲ್ ಗಳನ್ನು ಸ್ವಾಧೀನಪಡಿಸಿ, ಮುಂದಿನ ಕಾನೂನುಕ್ರಮಕ್ಕಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.