ಅರಿಯಡ್ಕ: ಟೆಂಪೋ ಚಾಲಕ ಆತ್ಮಹತ್ಯೆ
ಪುತ್ತೂರು: ಟೆಂಪೋ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ಜ.25ರಂದು ನಡೆದಿದೆ.
ಮೃತ ಚಾಲಕನನ್ನು ರವೀಂದ್ರ (45. ವ) ಎಂದು ಗುರುತಿಸಲಾಗಿದೆ. ಮಿನಿ ಟೆಂಪೋ ಚಾಲಕರಾಗಿದ್ದ ಅವರು ಮನೆಯಿಂದ ಸ್ವಲ್ಪ ದೂರದಲ್ಲಿ ತನ್ನ ಟೆಂಪೋ ನಿಲ್ಲಿಸಿ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಗೆ ಕಾರಣವೇನೆಂದು ತಿಳಿದು ಬಂದಿಲ್ಲ.