ಕೊಳ್ತಿಗೆ: ಷಣ್ಮುಖ ದೇವ ಪ್ರೌಢ ಶಾಲೆಯಿಂದ ಕಳ್ಳತನ
ಕೊಳ್ತಿಗೆ ಗ್ರಾಮದ ಷಣ್ಮುಖ ದೇವ ಪ್ರೌಢಶಾಲೆಯಿಂದ ಕಳ್ಳತನವಾಗಿರುವುದಾಗಿ ತಿಳಿದು ಬಂದಿದೆ.
ಶಾಲೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಂಪ್ಯೂಟರ್,14,500 ರೂ.ನಗದು, ಮೈಕ್ರೋಫೋನ್, ಸೌಂಡ್ ಬಾಕ್ಸ್, ಚಾರ್ಜರ್ ಲೈಟ್, ಮೈಕ್ ಸೆಟ್ ನ್ನು ಕಳ್ಳತನ ಮಾಡಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಎಸ್.ರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ರೂ.73000 ಎಂದು ಅಂದಾಜಿಸಲಾಗಿದೆ. ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.