ಕರಾವಳಿಕ್ರೈಂ

ಪುತ್ತೂರು: ಪ್ರತ್ಯೇಕ ಪ್ರಕರಣ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

ಪುತ್ತೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರ ಠಾಣಾ ಅಕ್ರ 69/2023 ಕಲ: 379 ಐ.ಪಿ.ಸಿ ಪ್ರಕರಣದಲ್ಲಿ 9 ಬಾರಿ ವಾರಂಟ್ ಜಾರಿಯಾಗಿದ್ದರೂ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾವೇರಿ, ಸವಣೂರು ನಿವಾಸಿ ಶಿವಕುಮಾರ್ ಯಾನೆ ಶಿವು ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡರವರು ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ಕೌಶಿಕ್ ರವರ ನೇತೃತ್ವದ, ಸಿಬ್ಬಂದಿಗಳಾದ ಸಿ ಹೆಚ್ ಸಿ ಪ್ರಶಾಂತ ರೈ, ಸಿಹೆಚ್ ಸಿ ಗಣೇಶ ಎನ್, ಸಿಪಿಸಿ ಶ್ರೀಶೈಲ ಎಂ.ಕೆ, ಸಿಪಿಸಿ ಮಹಮ್ಮದ್ ಮೌಲಾನಾ ಅವರುಗಳನ್ನು ಒಳಗೊಂಡ ವಿಶೇಷ ತಂಡವು ಆಗಸ್ಟ್ 12ರಂದು ಬೆಂಗಳೂರಿನ ಅಬ್ಜಿಗೆರೆ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ ಯಾನೆ ಕಲ್ಲು ಮಾಮು ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣಾ ಪೊಲೀಸ್ CHC 826 ಶಿವರಾಮ ರೈ ಮತ್ತು ಡಿವೈಎಸ್‌ಪಿ ವಿಶೇಷ ತಂಡದ ಸಿಬ್ಬಂದಿಗಳಾದ CPC 2384 ಶಾಂತಕುಮಾರ್, CPC 1035  ರವಿಕುಮಾರ್, CPC 1926  ರಮೇಶ್ ರವರುಗಳನ್ನು ಒಳಗೊಂಡ ತಂಡವು ದಸ್ತಗಿರಿ ಮಾಡಿರುತ್ತಾರೆ.
ಸದ್ರಿ ಆರೋಪಿಯ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿರುತ್ತದೆ.



ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ: 341, 323, 324, 504, 506 R/w 34 IPC ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು ಕಡಬ ಠಾಣಾ ಪೊಲೀಸರು ಆ.12 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Leave a Reply

Your email address will not be published. Required fields are marked *

error: Content is protected !!