ಕೊಳ್ತಿಗೆ: ವ್ಯಾಪಾರ ಮಾಡುವ ನೆಪದಲ್ಲಿ ಗೂಡಂಗಡಿ ಮಹಿಳೆಯ ಚಿನ್ನದ ಸರ ಎಳೆದು ಪರಾರಿಯಾದ ಅಪರಿಚಿತರು
ಪುತ್ತೂರು: ಗೂಡಂಗಡಿಗೆ ಬಂದ ಅಪರಿಚಿತರು ಗೂಡಂಗಡಿ ನಡೆಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾದ ಘಟನೆ ಜ.11 ರಂದು ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ನಡೆದಿದೆ
ಈ ಬಗ್ಗೆ ಗೂಡಂಗಡಿ ನಡೆಸುತ್ತಿದ್ದ ಐವರ್ನಾಡಿನ ಜಯಂತಿ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾನು ಗೂಡಂಗಡಿ ವ್ಯಾಪಾರ ಮಾಡುತ್ತಿದ್ದು ಮಧ್ಯಾಹ್ನದ ವೇಳೆಗೆ ಗೂಡಂಗಡಿ ಎದುರು ಇರುವ ರಸ್ತೆಯಲ್ಲಿ ಸ್ಕೂಟರಿನಲ್ಲಿ ಅಪರಿಚಿತ ಸವಾರ ಮತ್ತು ಸಹಸವಾರರಿಬ್ಬರು ಬಂದಿದ್ದು ಸ್ಕೂಟರನ್ನು ರಸ್ತೆಯಲ್ಲಿಯೇ ಸವಾರ ನಿಲ್ಲಿಸಿದ್ದು ಅದರಲ್ಲಿದ್ದ ಸಹಸವಾರ ಕೆಳಗೆ ಇಳಿದು ಗೂಡಂಗಡಿ ಗೆ ಬಂದು ವ್ಯಾಪಾರ ಮಾಡುವ ನೆಪದಲ್ಲಿ ಸ್ಕೂಟರ್ ಸಹ ಸವಾರನು ಒಮ್ಮೆಲೆ ಗೂಡಂಗಡಿಯಲ್ಲಿದ್ದ ಡ್ರಾವರ್ ಗೆ ಕೈ ಹಾಕಲು ಪ್ರಯತ್ನಿಸಿದರು.
ತಕ್ಷಣ ಡ್ರಾವರನ್ನು ನಾನು ದೂಡಿದ್ದು ಆ ಸಮಯ ಆ ವ್ಯಕ್ತಿ ನನ್ನ ಕೊರಳಿಗೆ ಕೈ ಹಾಕಿ ಕುತ್ತಿಗೆಯಲ್ಲಿ ಧರಿಸಿದ್ದ ಬಂಗಾರದ ಸರವನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿರುತ್ತಾರೆ.
ಕೊರಳಲ್ಲಿ ಧರಿಸಿದ್ದ ಬಂಗಾರವು ಸರ ಸುಮಾರು 16 ಗ್ರಾಂ ತೂಕ ಇದ್ದು ಅದರ ಈಗಿನ ಮೌಲ್ಯ ರೂ 80.000//-ಆಗಬಹುದು. ಆದುದರಿಂದ ಅಪರಿಚಿತ ವ್ಯಕ್ತಿಗಳನ್ನು ಕೂಡಲೇ ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.