ಕರಾವಳಿ

ಸುಳ್ಯ: ರಸ್ತೆ ಅಭಿವೃದ್ಧಿಗಾಗಿ ಧರಣಿ ಕುಳಿತ ಪತ್ರಕರ್ತ ಶರೀಫ್ ಜಟ್ಟಿಪಳ್ಳಸುಳ್ಯದ ರಸ್ತೆಯೊಂದನ್ನು ದುರಸ್ತಿಪಡಿಸಿ ಕೊಡುವಂತೆ ಆಗ್ರಹಿಸಿ ಈ ಭಾಗದ ಪತ್ರಕರ್ತರೋರ್ವರು ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದು, ಸ್ಥಳಕ್ಕೆ ದೌಡಾಯಿಸಿ ಬಂದ ನಗರ ಪಂಚಾಯತ್ ಮುಖ್ಯಾಧಿಧಿಕಾರಿ ಸುಧಾಕರರವರು ಕೂಡಲೇ ಸರಿಪಡಿಸಿ ಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದುಕೊಂಡ ಘಟನೆ ಇಂದು ನಡೆದಿದೆ.

ಸುಳ್ಯದ ಜಟ್ಡಪಳ್ಳದಿಂದ ಕೊಡಿಯಾಲಬೈಲ್ ವರೆಗಿನ ರಸ್ತೆ ತೀರಾ ಹದಗೆಟ್ಡಿದ್ದು ಈ ಬಗ್ಗೆ ಪತ್ರಿಕೆಯಲ್ಲಿ ಹಲವಾರು ಬಾರಿ ವರದಿಗಳನ್ನು ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಇಂದು ಶರೀಫ್ ಅವರು ರಸ್ತೆ ಪ್ಯಾಚ್ ವರ್ಕ್ ಗಿಗಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ವಿನೂತನ ಶೈಲಿಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಇವರು ಪ್ರತಿಭಟನೆ ಮಾಡುವುದನ್ನು ಅರಿತ ಸ್ಥಳೀಯ ನಿವಾಸಿಗಳು ಬಂದು ಇವರಿಗೆ ಸಾತ್ ನೀಡಿದರು.
ಪ್ರತಿಭಟನೆಗೆ ಕುಳಿತ ಶರೀಫ್ ರವರೊಂದಿಗೆ ಸ್ಥಳೀಯರಾದ ರಾಮಚಂದ್ರ ಪೆಲ್ತಡ್ಕ, ಹರಿಶ್ಚಂದ್ರ ಮೊದಲಾದವರು ಸೇರಿಕೊಂಡರು.

ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಪ್ರತಿಭಟನೆಗಾರರೊಂದಿಗೆ ಮಾತುಕತೆ ನಡೆಸಿ
ಜ.9 ರೊಳಗೆ ಈ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಕೊಡುತ್ತೇವೆ. ಜನವರಿ ಅಂತ್ಯಕ್ಕೆ ಟೆಂಡರ್ ನಡೆದು ಪೂರ್ಣ ಡಾಮರೀಕರಣ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಅದರಂತೆ ಪ್ರತಿಭಟನೆ ನಿರತರಾದ ಶರೀಫ್ ಜಟ್ಟಿಪಳ್ಳ ಪ್ರತಿಭಟನೆ ಹಿಂತೆಗೆದುಕೊಂಡರು.

Leave a Reply

Your email address will not be published. Required fields are marked *

error: Content is protected !!