ಸುಲ್ತಾನ್ ಡೈಮಂಡ್ & ಗೋಲ್ಡ್ ಮಳಿಗೆಯಲ್ಲಿ
ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ
ಪುತ್ತೂರು: ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಮಳಿಗೆಯಲ್ಲಿ ಆಭರಣಗಳ ಅಮೋಘ ಸಂಗ್ರಹವಿದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ಡೈಮಂಡ್ ಕಲೆಕ್ಷನ್ ಕೂಡಾ ಇದೆ ಎಂದು ತುಳು ಸಿನಿಮಾದ ನಟಿ ಧನ್ಯ ಪೂಜಾರಿ ಹೇಳಿದರು.
ಆ.20ರಂದು ಪುತ್ತೂರು ಏಳ್ಮುಡಿಯಲ್ಲಿರುವ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್ ವಜ್ರಾಭರಣ ಪ್ರದರ್ಶನ ವಿಶ್ವ ವಜ್ರ ಡೈಮಂಡ್ ಎಕ್ಸಿಬಿಷನ್ ಉದ್ಘಾಟಿಸಿ, ಆಭರಣಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹೆಲ್ತ್ ಆಂಡ್ ಸ್ಯಾನಿಟರಿ ಇನ್ಸ್ಪೆಕ್ಟರ್ ಆಯಿಶಾ ಪೆರ್ನೆ ಮಾತನಾಡಿ ಸುಲ್ತಾನ್ ಗೋಲ್ಡ್ ಮಳಿಗೆಯು ಆಭರಣ ಕ್ಷೇತ್ರದ ಸುಲ್ತಾನ್ ಆಗಿ ಮೆರೆಯುತ್ತಿದ್ದು ಸದಾ ಹೊಸತನಗಳೊಂದಿಗೆ ಆಭರಣಗಳನ್ನು ಪರಿಚಯಿಸುತ್ತಿದೆ, ವಿವಿಧ ಶೈಲಿಯ ಚಿನ್ನಾಭರಣಗಳನ್ನು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಹೇಳಿದರು. ಮೊದಲು ಸುಲ್ತಾನ್ ಗಾಗಿ ಮಂಗಳೂರಿಗೆ ಹೋಗಬೇಕಾಗಿದ್ದು, ಈಗ ಸುಲ್ತಾನ್ ಮಳಿಗೆ ಪುತ್ತೂರಿನಲ್ಲಿರುವುದು ಸಂತಸದ ವಿಚಾರ ಎಂದರು.

ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಎಲ್. ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆ ಎಲ್ಲರಿಗೂ ಚಿರಪರಿಚಿತ ಮಳಿಗೆಯಾಗಿದ್ದು ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರುಗಳಿಸಿದೆ, ಹೆಸರಿಗೆ ತಕ್ಕಂತೆ ಇಲ್ಲಿ ಒಳ್ಳೆಯ ಕಲೆಕ್ಷನ್ ಕೂಡಾ ಇದೆ, ಈ ಮಳಿಗೆ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚುವ ಕಾರ್ಯವೂ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರ ಪರವಾಗಿ ಶನಾಜ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದರ್ಬೆ ಗ್ಲಾಮ್ ಸ್ಟುಡಿಯೋದ ದಿವ್ಯಾ ಸಂತೋಷ್ ರೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ, ಲಸ್ರಾದೋ ಮೆಟಲ್ ಮಾರ್ಟ್ ನ ಜಸಿಂತಾ ಫೆರ್ನಾಂಡೀಸ್ ವಿವಿಧ ವಿನ್ಯಾಸದ ಡೈಮಂಡ್ ಆಭರಣಗಳನ್ನು ಬಿಡುಗಡೆಗೊಳಿಸಿದರು. ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಮಳಿಗೆಯ ಪುತ್ತೂರು ಬ್ರ್ಯಾಂಚ್ ಮ್ಯಾನೇಜರ್ ಬಾಬು, ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್, ಮ್ಯಾನೇಜರ್ ಗಳಾದ ರಹಾವತ್, ಸಾದಿಕ್ ಉಪಸ್ಥಿತರಿದ್ದರು. ನಿರೂಪಕಿ ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.

ವಜ್ರಾಭರಣಗಳ ಬೃಹತ್ ಸಂಗ್ರಹ:
ವಿಶ್ವ ವಜ್ರ ಕಾರ್ಯಕ್ರಮದಲ್ಲಿ ಯು.ಎಸ್., ಬೆಲ್ಜಿಯಂ, ಟ್ರೆಡಿಷನಲ್, ಟರ್ಕಿ, ಮಿಡಲ್ ಈಸ್ಟ್, ಪ್ರೆಂಚ್, ಇಟಲಿ, ಪ್ರಾನ್ಸ್, ಸಿಂಗಾಪುರ ದ ಪ್ರಮಾಣೀಕೃತ ವಜ್ರದ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಲಾಗುತ್ತಿದೆ. ಸೆ.೫ರವರೆಗೆ ಡೈಮಂಡ್ ಕ್ಯಾರೆಂಟ್ ಗೆ ಪ್ಲಾಟ್ ೮ ಸಾವಿರ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರ ಆಭರಣ ಸಂಗ್ರಹಗಳು, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳಿದೆ. ಕೈಗೆಟಕುವ ದೈನಂದಿನ ಉಡುಗೆ ವಜ್ರದ ಸಂಗ್ರಹವನ್ನು ಹೊಂದಿದೆ. ಲೈಟ್ ವೈಟ್ ಡೈಮಂಡ್ ನೆಕ್ಲೇಸ್ ಗಳು, ಲೈಟ್ ವೇಟ್ ಡೈಮಂಡ್ ಬ್ಯಾಂಗಲ್, ಡೈಮಂಡ್ ರಿಂಗ್ ಗಳು ಲೈಟ್ ವೇಟ್ ಸಂಗ್ರಹಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.