ಕಡಬ ಪಟ್ಟಣ ಪಂಚಾಯತ್ ಚುನಾವಣೆ: ವಾರ್ಡ್ 1ರಲ್ಲಿ ಬಿಜೆಪಿಗೆ ಶೂನ್ಯ ಮತ
ಕಡಬ: ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾದ ವಾರ್ಡ್ 1 ಕಳಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮಾ ಅವರಿಗೆ ಯಾವುದೇ ಮತ ಚಲಾವಣೆಯಾಗಿಲ್ಲ.

ಇಲ್ಲಿ ಕಾಂಗ್ರೆಸ್‌ನ ತಮನ್ನಾ ಜಬೀನ್ ಕಡಬ ಅವರು 201 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು ಪರಾಜಿತ ಪಕ್ಷೇತರ ಅಭ್ಯರ್ಥಿ ಜೈನಾಬಿ ಅವರು 139 ಮತಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಎಸ್‌ಡಿಪಿಐನ ಸಮೀರಾ ಹಾರಿಸ್ 74 ಮತಗಳಿಸಿದ್ದಾರೆ. ಬಿಜೆಪಿಯ ಪ್ರೇಮಾ ಅವರು ಆರನೇ ವಾರ್ಡ್‌ನಿಂದಲೂ ಸ್ಪರ್ಧೆ ಮಾಡಿ 177 ಮತಗಳಿಸಿ ಪರಾಭವಗೊಂಡಿದ್ದಾರೆ.





